ಏನೇ ಇದ್ರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ: ಬಂದ್ ಬೇಡ- ಸಾರಿಗೆ ನೌಕರರಿಗೆ ಡಿಸಿಎಂ ಲಕ್ಷ್ಮಣ್ ಸವದಿ ಮನವಿ… ಕಲ್ಬುರ್ಗಿ,ಏಪ್ರಿಲ್,6,2021(..):ಉಪಚುನಾವಣೆ ಹಿನ್ನೆಲೆ ಮೇ 4ರವರೆಗೂ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಭರವಸೆ ನೀಡಲು ಆಗುವುದಿಲ್ಲ.ಅದ್ದರಿಂದ ಮುಷ್ಕರ ಕೈಬಿಡುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ. ಸರ್ಕಾರ ನೀಡಿದ್ದ ಬೇಡಿಕೆ ಈಡೇರಿಸಿಲ್ಲ ಎಂದು ಆರೋಪಿಸಿ ನಾಳೆಯಿಂದ ಸಾರಿಗೆ ನೌಕರರು ಮುಷ್ಕರ ಹೂಡಿದ್ದು, ಈ ಕುರಿತು ಕಲ್ಬುರ್ಗಿಯಲ್ಲಿ ಮಾತನಾಡಿರುವ ಡಿಸಿಎಂ ಲಕ್ಷ್ಮಣ್ ಸವದಿ, ನಿನ್ನೆ ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ಉಪಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಭರವಸೆ ನೀಡಲು ಆಗಲ್ಲ. ಮುಷ್ಕರ ಕೈಬಿಡುವಂತೆ ಹೇಳಿದ್ದೇನೆ ಎಂದರು. ಕೋವಿಡ್ ಸಂಕಷ್ಟ ಇದೆ. ಕೋವಿಡ್ ವೇಳೆ ಮುಷ್ಕರ ಸರಿಯಲ್ಲ. ಹೀಗಾಗಿ ಇದನ್ನ ಮುಂದಕ್ಕೆ ಹಾಕಬೇಕು. ಇಂದು ಮಧ್ಯಾಹ್ನ ಕಾರ್ಮಿಕರ ನಾಯಕರ ಜತೆ ಸಭೆ ಕರೆದಿದ್ದೇನೆ. ಮಧ್ಯಾಹ್ನದ ನಂತರ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. … “ , ’ ”: , . 06, 2021 (..): “ 4 . . , .“ , . ’ ,” .: / / / / : - -- -