ಚಾಮುಂಡಿ ಬೆಟ್ಟದಲ್ಲಿ ಅರ್ಧಕ್ಕೆ ನಿಂತ ಮಳಿಗೆಗಳ ನಿರ್ಮಾಣ : 4 ಕೋಟಿ ರೂ. ಬಿಡುಗಡೆಗೆ ಸಂಸದ ಪ್ರತಾಪ್ ಸಿಂಹ ಮನವಿ ಮೈಸೂರು,ಏಪ್ರಿಲ್,05,2021(..) :ಚಾಮುಂಡಿ ಬೆಟ್ಟದಲ್ಲಿ ಅರ್ಧಕ್ಕೆ ನಿಂತಿರುವ ಮಳಿಗೆಗಳ ನಿರ್ಮಾಣಕ್ಕೆ ಬೇಕಾದ 4 ಕೋಟಿ ರೂ. ಬಿಡುಗಡೆ ಮಾಡುವಂತೆ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಂಸದ ಪ್ರತಾಪ್ ಸಿಂಹ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಂಸದ ಪ್ರತಾಪ್ ಸಿಂಹ ಮನವಿಗೆ ಪೂರಕವಾಗಿ ಸ್ಪಂದಿಸಿದ್ದು, ಇದೇ ತಿಂಗಳ 9ನೇ ತಾರೀಖು ಸಭೆ ಕರೆದು ಅನುಮೋದನೆ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. : ----4 --- -