ಏ.10ರಿಂದ 13ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ… ಚಾಮರಾಜನಗರ,ಏಪ್ರಿಲ್,5,2021(..):ಕೊರೋನಾ ಹಿನ್ನೆಲೆ ಏಪ್ರಿಲ್ 10ರಿಂದ 13ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಕೋವಿಡ್-‌19 ನಿಯಂತ್ರಣಕ್ಕಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 10 ರಿಂದ 13 ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಅವಧಿಯಲ್ಲಿ ಹೊರಗಿನಿಂದ ಬೆಟ್ಟಕ್ಕೆ ಆಗಮಿಸುವ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಬೆಟ್ಟದಲ್ಲಿನ ನಿವಾಸಿಗಳು ಹಾಗೂ ಕೆಲಸದ ಮೇಲೆ ಬೆಟ್ಟಕ್ಕೆ ತೆರಳುವ ಅಧಿಕಾರಿಗಳಿಗೆ ಮಾತ್ರ ಬೆಟ್ಟಕ್ಕೆ ಪ್ರವೇಶಾವಕಾಶವಿರುತ್ತದೆ. ಬೆಟ್ಟಕ್ಕೆ ಜನರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. …. . 10 13Chamarajanagara, .5, 2021 (..): 10 13, -19 . , . 10 13. 2nd . , .: 10-13/ / / / : - - -