ಸಿದ್ದರಾಮಯ್ಯ ಕಲಾಪವನ್ನು ಹಾಳು ಮಾಡಿದರು : ಸಚಿವ ಜಗದೀಶ್ ಶೆಟ್ಟರ್ ಆರೋಪ ಬೆಂಗಳೂರು,ಏಪ್ರಿಲ್,04,2021(..) :ಸರ್ಕಾರದ ವಿರುದ್ಧ ಮಾತನಾಡುವುದಕ್ಕೆ ವಿಪಕ್ಷಗಳಿಗೆ ವಿಷಯವಿಲ್ಲ. ಯಾವುದೋ ವಿಚಾರಕ್ಕೆ ಸದನದ ಬಾವಿಗಿಳಿದು ಧರಣಿ ಮಾಡಿದ ಸಿದ್ದರಾಮಯ್ಯ ಕಲಾಪವನ್ನು ಹಾಳು ಮಾಡಿದರು ಎಂದು ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.ಬಜೆಟ್ ಅಧಿವೇಶನದಲ್ಲಿ ಭಾಷಣ, ಚರ್ಚೆ ಮಾಡಲಿಲ್ಲ. ಜನಪರವಾದ ವಿಷಯಗಳ ಕುರಿತು ಚರ್ಚಿಸಲಿಲ್ಲ. ಆಡಳಿತ ಯಂತ್ರ ಸರಿಯಿಲ್ಲ ಎಂದಾದರೂ ಹೇಳಬಹುದಿತ್ತು. ಕಾಂಗ್ರೆಸ್ ನಾಯಕರು ಇದೀಗ ಹಸಿ ಸುಳ್ಳು ಹೇಳಿದರೆ ಜನರು ನಂಬುವುದಿಲ್ಲ ಎಂದು ಕಿಡಿಕಾರಿದ್ದಾರೆ. : ---- -