“ಮತ್ತೆ ಅವಕಾಶ ಸಿಕ್ಕರೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬಹುದು” : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಗಳೂರು,ಏಪ್ರಿಲ್,04,2021(..): ಸಿದ್ದರಾಮಯ್ಯನವರು ಸಿಎಂ ಆಗಿದ್ದಂತ ಸಂದರ್ಭದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಮತ್ತೆ ಅವಕಾಶ ಸಿಕ್ಕರೇ ಮುಖ್ಯಮಂತ್ರಿ ಕೂಡ ಆಗಬಹುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಅಂತ ಕರೆದರೇ ಅದು ಅವರಿಗೆ ಮಾಡುವಂತ ಅಪಮಾನ. ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಅಂತ ಕರೆಯೋದು ಕೇಳಿದರೆ ಮನಸ್ಸಿಗೆ ನೋವಾಗುತ್ತೆ. ಇದರ ಬದಲಾಗಿ ಸಿದ್ದರಾಮಯ್ಯನವರೇ ಎಂದು ಕರೆಯಿರಿ ಎಂದಿದ್ದಾರೆ. ಮತ್ತೆ ಅವಕಾಶ ಸಿಕ್ಕರೇ ಮುಖ್ಯಮಂತ್ರಿ ಕೂಡ ಆಗಬಹುದು. ಇದರಿಂದಾಗಿ ಸಿದ್ದರಾಮಯ್ಯನವರೇ ಅಥವಾ ವಿರೋಧ ಪಕ್ಷದ ನಾಯಕರೇ ಎಂಬುದಾಗಿ ಕರೆಯೋದು ಉತ್ತಮ ಎಂದು ತಿಳಿಸಿದ್ದಾರೆ. : -- -- - -