ಯತ್ನಾಳ್ ಮತ್ತು ಈಶ್ವರಪ್ಪ ಮೇಲೆ ಕ್ರಮ ಜರುಗಿಸಲಾಗದ ದುರ್ಬಲ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು,ಏಪ್ರಿಲ್,04,2021(..) :ನಳೀನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿಗರೇ ನೀವು ವೀಕ್ ಅಧ್ಯಕ್ಷರು ಎಂದು ಹೇಳುವರು. ಯತ್ನಾಳ್ ಮತ್ತು ಈಶ್ವರಪ್ಪ ಮೇಲೆ ಕ್ರಮ ಜರುಗಿಸಲಾಗದ ದುರ್ಬಲ ಅಧ್ಯಕ್ಷ ಎನ್ನುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ, ನೀರಾವರಿಗೆ ಅನುದಾನ ದಕ್ಕಿತ್ತು. ಮಕರಂದ ಸೂಸುವ ಬಿಜೆಪಿಯವರಿಂದ ಕಲಬುರಗಿ ಜಿಲ್ಲೆಗೆ ಒಂದು ಸಚಿವ ಸ್ಥಾನವೂ ಸಿಗಲಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಬಿಜೆಪಿಯಿಂದ ಅನುದಾನ ಹಾಗೂ ಪ್ರತ್ಯೇಕ ರೈಲ್ವೆ ವಿಭಾಗವನ್ನು ಬಿಡಿ, ಒಂದು ರೈಲನ್ನೂ ನಿಲ್ಲಿಸಲು ಸಹ ನಿಮ್ಮಿಂದ ಆಗಲಿಲ್ಲ. ಇವರ ಮಕರಂದದ ಸುವಾಸನೆಗೆ ಹಿಂದಿನ ಸರ್ಕಾರದ ಯೋಜನೆಗಳೆಲ್ಲಾ, ರದ್ದಾಗಿದೆ ಎಂದು ಕಿಡಿಕಾರಿದರು.ಖರ್ಗೆಯವರು ವಿಷಕಾರಿಯಾಗಿದ್ದರಿಂದಲೇ ನಮ್ಮ ಭಾಗಕ್ಕೆ 371() ರೈಲ್ವೆ ಡಿವಿಷನ್ ಆಸ್ಪತ್ರೆ ಕೇಂದ್ರಿಯ ವಿ.ವಿ ವಿಮಾನ ನಿಲ್ದಾಣ ಜವಳಿ ಪಾರ್ಕ್ ದೊರೆತಿದೆ ಎಂದು ತಿಳಿಸಿದ್ದಾರೆ. : ------ - -