ನನಗೂ ಈ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ : ಮಾಜಿ ಸಚಿವ ಡಿ.ಸುಧಾಕರ್ ಬೆಂಗಳೂರು,ಏಪ್ರಿಲ್,04,2021(..) :ನನಗೂ ಈ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕುತ್ತಿರುವುದು ನೋಡಿದರೆ ನನಗೆ ಅಚ್ಚರಿಯಾಗುತ್ತಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಯುವತಿಗೂ ನನಗೂ ಯಾವುದೇ ಸಂಬಂಧವಿಲ್ಲ, ಹಣವನ್ನೂ ನೀಡಿಲ್ಲ. ನನಗೆ ಯಾರೂ ಕೂಡ ಬ್ಲಾಕ್ ಮೇಲ್ ಮಾಡಿಲ್ಲ. ನಾನು ಹಣವನ್ನೂ ನೀಡಿಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ಮೊದಲಿನಿಂದ ಮಾಜಿ ಸಚಿವರೊಬ್ಬರಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಈಗ ನನ್ನ ಹೆಸರನ್ನು ತಳುಕು ಹಾಕಲಾಗುತ್ತಿದೆ. ನನಗೆ ಅಂತಹ ಭಯವಿದ್ದಿದ್ದರೆ ಇಂಜಂಕ್ಷನ್ ಆರ್ಡರ್ ಪಡೆಯುತ್ತಿದ್ದೆ.ನನಗೆ ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲ ಎಂದ ಮೇಲೆ ನಾನ್ಯಾಕೆ ಭಯ ಪಡಲಿ? ಎಸ್ ಐ ಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಕರೆದರೆ ಹೋಗಿ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ. : - - ---.