ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಸಿದ್ಧರಾಮಯ್ಯನೇ ಕಾರಣ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್… ಬೀದರ್,ಏಪ್ರಿಲ್,3,2021(..):ಮಲ್ಲಿಕಾರ್ಜುನ ಖರ್ಗೆ ಸೋಲಲು ಸಿದ್ಧರಾಮಯ್ಯನೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದರು. ಬಸವಕಲ್ಯಾಣದಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ದಲಿತರ ಹೆಸರು ಹೇಳಿಕೊಂಡು ಕಾಂಗ್ರೆಸ್ ಮತ ಪಡೆಯುತ್ತಿದೆ. ಆದರೆ ಏನು ಮಾಡಿಲ್ಲ. ದಲಿತರ ಬಗ್ಗೆ ಕಣ್ಣೀರು ಹಾಕುವ ಸಿದ್ಧರಾಮಯ್ಯ ಅವರು ಪರಮೇಶ್ವರ್ ಅವರನ್ನ ಏಕೆ ಸಿಎಂ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಸಿಡಿ ಪ್ರಕರಣ ಕುರಿತು ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸಿಡಿ ಕೇಸ್ ನಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಸ್ ಐಟಿ ತನಿಖೆ ದಾರಿ ತಪ್ಪಿಸಲು ಅವಕಾಶ ಕೊಡಲಾಗದು. ಎಸ್ ಐಟಿ ಮೇಲೆ ಸಂಪೂರ್ಣ ಸಂಬಿಕೆ ಇದೆ. ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ ಎಂದರು. : - - –- - .