ಆರ್ ಸಿಬಿ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗೆ ಕೊರೋನಾ ಸೋಂಕು ದೃಢ… ಬೆಂಗಳೂರು,ಏಪ್ರಿಲ್,4,2021(..):ಐಪಿಎಲ್ ಗೆ ಇನ್ನ ಕೆಲವೇ ದಿನಗಳು ಬಾಕಿ ಇದ್ದು ಈ ಮಧ್ಯೆ ಆರ್ ಸಿಬಿ ತಂಡಕ್ಕೆ ಬಿಗ್ ಶಾಕ್. ಹೌದು, ಆರ್ ಸಿಬಿ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗೆ ಕೊರೋನಾ ಸೋಂಕು ದೃಢವಾಗಿದೆ. ಸದ್ಯ ದೇವದತ್ ಪಡಿಕ್ಕಲ್ ಹೊಟೇಲ್ ನಲ್ಲೇ ಐಸೋಲೇಷನ್ ಆಗಿದ್ದಾರೆ. ಏಪ್ರಿಲ್ 9 ರಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯ ಆರ್ ಸಿಬಿ ಮತ್ತು ಮುಂಬೈ ನಡುವೆ ನಡೆಯಲಿದೆ. ಆದರೆ ಉದ್ಘಟನಾ ಪಂದ್ಯಕ್ಕೆ ದೇವದತ್ ಪಡಿಕಲ್ ಆರ್ ಸಿಬಿ ತಂಡಕ್ಕೆ ಅಲಭ್ಯವಾಗಲಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ ಆಟಗಾರ ಅಕ್ಷರ್ ಪಟೇಲ್ ಗೂ ಕೂಡ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಅವರು ಸಹ ಐಸೋಲೇಷನ್ ನಲ್ಲಿದ್ದಾರೆ. : - – - - -