ಕರೋನಾ ನಿಯಂತ್ರಣಕ್ಕೆ ಟಫ್ ರೂಲ್ ಅನಿವಾರ್ಯ: ಥಿಯೇಟರ್ ರೂಲ್ಸ್ ನಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ- ಸಚಿವ ಸುಧಾಕರ್… ಬೆಂಗಳೂರು,ಏಪ್ರಿಲ್,3,2021(..):ಕರೋನಾ ನಿಯಂತ್ರಣಕ್ಕೆ ಟಫ್ ರೂಲ್ ಅನಿವಾರ್ಯ. ತಾಂತ್ರಿಕ ಸಲಹಾ ಸಮಿತಿ ಮೇರೆಗೆ ಮಾರ್ಗಸೂಚಿ ಜಾರಿ ಮಾಡಲಾಗಿದ್ದು, ಥಿಯೇಟರ್ ರೂಲ್ಸ್ ನಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ನೂತನ ಮಾರ್ಗಸೂಚಿ ಕ್ರಮಗಳು ಏಕಾಏಕಿ ಜಾರಿಗೆ ತಂದಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ.. ಗೈಡ್ ಲೈನ್ಸ್ ಜಾರಿ ವಿಷಯದಲ್ಲಿ ರಾಜಿ ಇಲ್ಲ. ಥಿಯೇಟರ್ ರೂಲ್ಸ್ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು. ಕಡ್ಡಾಯವಾಗಿ ಮಾರ್ಗಸೂಚಿಗಳನ್ನ ಪಾಲನೆ ಮಾಡಬೇಕು ಎಂದು ಹೇಳಿದ ಡಾ.ಕೆ.ಸುಧಾಕರ್, . ಇನ್ನೆರಡು ತಿಂಗಳು ಕೊರೋನಾ ಆರ್ಭಟ ಇರಲಿದೆ ಎಂಬುದಾಗಿ ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಇದರಿಂದಾಗಿ ಪರಿಸ್ಥಿತಿ ಕೈ ಮೀರಬಾರದೆಂದು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಏಕಾಏಕಿ ಮಾರ್ಗಸೂಚಿ ರಿಲೀಸ್ ಮಾಡಿಲ್ಲ. ಅಳೆದು ತೂಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇಂದೇ ಸಂದರ್ಭದಲ್ಲಿ ಮಕ್ಕಳಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. 8 ಜಿಲ್ಲೆಗಳ ಥಿಯೇಟರ್ ಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಈಗ ಮಾಡಿರುವ ನಿಯಮ ತಾತ್ಕಾಲಿಕ ಮಾತ್ರವಾಗಿದೆ. ಗೈಡ್ ಲೈನ್ಸ್ ಜಾರಿ ವಿಷಯದಲ್ಲಿ ರಾಜಿ ಇಲ್ಲ ಎಂದು ಸುಧಾಕರ್ ಹೇಳಿದ್ದಾರೆ. : - -- - –- .