ರಾಜ್ಯಪಾಲರಿಗೆ ಸರ್ಕಾರದ ಬಗ್ಗೆ ಪತ್ರ ಬರೆಯಬೇಕಾದ ಅಗತ್ಯವಿರಲಿಲ್ಲ : ಈಶ್ವರಪ್ಪ ವಿರುದ್ಧ ಸುರೇಶ್ ಕುಮಾರ್ ಅಸಮಾಧಾನ ಮೈಸೂರು,ಏಪ್ರಿಲ್,02,2021(..) :ಒಳ್ಳೆಯ ವಿಚಾರವನ್ನು ಹೊರಗಡೆ ಹೇಳಬೇಕು. ಕೆಟ್ಟದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ರಾಜ್ಯಪಾಲರಿಗೆ ಸರ್ಕಾರದ ಬಗ್ಗೆ ಪತ್ರ ಬರೆಯಬೇಕಾದ ಅಗತ್ಯವಿರಲಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ಬಿಳಿಗಿರಿ ರಂಗನಾಥ ಬೆಟ್ಟದಲ್ಲಿ ಸಿಎಂ ವಿರುದ್ಧ ಸಚಿವ ರಾಜ್ಯಪಾಲರಿಗೆ ಈಶ್ವರಪ್ಪ ಪತ್ರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರಿಗೆ ಸರ್ಕಾರದ ಬಗ್ಗೆ ಪತ್ರ ಬರೆಯಬೇಕಾದ ಅಗತ್ಯವಿರಲಿಲ್ಲ ಎಂದಿದ್ದಾರೆ. ಕೊರೊನಾ ಹೆಚ್ಚಳ ಹಿನ್ನೆಲೆ, ಬೆಂಗಳೂರಿನಲ್ಲಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ 15 ದಿನ ರಜೆ ಘೋಷಿಸಲಾಗಿದೆ. ಹದಿನೈದು ದಿನಗಳು ಮಾತ್ರ. ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ. : ------ --- -