ಮೈಸೂರು ಪಾಲಿಕೆ ಮೇಯರ್ ದಂಪತಿಗೆ ಕೊರೊನ ಮೈಸೂರು,ಏಪ್ರಿಲ್,02,2021(..) : ಮೈಸೂರು ಪಾಲಿಕೆ ಮೇಯರ್ ರುಕ್ಮಿಣಿ, ಮಾದೇಗೌಡ ದಂಪತಿಗೆ ಕೊರೊನ ಸೋಂಕು ದೃಢಪಟ್ಟಿದೆ. ಮೇಯರ್ ರುಕ್ಮಿಣಿ ಮಾದೇಗೌಡ ಮಾ.13ರಂದು ಕೊರೊನ ಲಸಿಕೆ ಪಡೆದಿದ್ದರು. ಹೀಗಿದ್ದರೂ, ಸೋಂಕಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇತ್ತೀಚಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಲಸಿಕೆ ಪಡೆದರೂ ಸೋಂಕು ತಗುಲಿರುವ ಬಗ್ಗೆ ಅಚ್ಚರಿಯಾಗಿದ್ದು, ಮೇಯರ್ ಸಂಪರ್ಕದಲ್ಲಿದ್ದವರಿಗೆ ಅಂತಂಕ ಶುರುವಾಗಿದೆ. ಮೇಯರ್ ಜೊತೆಗೆ ಪಾಲಿಕೆಯ ಮತ್ತೋರ್ವ ಎಂಜಿನಿಯರ್ ಗೂ ಕೊರೊನ ಸೋಂಕು ದೃಢಪಟ್ಟಿದೆ. : ----