ಅನುದಾನ ಬಿಡುಗಡೆ ವಿವಾದ, ಚಾಮುಂಡೇಶ್ವರಿ ಮೊರೆ ಹೋದ ಸಚಿವ ಕೆ.ಎಸ್.ಈಶ್ವರಪ್ಪ ಮೈಸೂರು,ಏಪ್ರಿಲ್,02,2021(..) :ಗ್ರಾಮೀಣಾಭಿವೃದ್ದಿ ಇಲಾಖೆ ಅನುದಾನ ಬಿಡುಗಡೆ ವಿವಾದ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ. ಶುಕ್ರವಾರ ಕುಟುಂಬ ಸಮೇತ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಅನುದಾನ ಬಿಡುಗಡೆ ವಿವಾದ ಸಂಬಂಧಿಸಿದಂತೆ ಕೆ.ಎಸ್‌‌.ಈಶ್ವರಪ್ಪ ವಿರುದ್ದ ಸಹಿ ಸಂಗ್ರಹ ಹಿನ್ನೆಲೆ, ಕೆ.ಎಸ್.ಈಶ್ವರಪ್ಪಗೆ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಸಿಎಂ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿರುವ ಈಶ್ವರಪ್ಪ ನಡೆಗೆ ಸಿಎಂ ಆಪ್ತ ಸಚಿವ, ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈಶ್ವರಪ್ಪ ನನ್ನ ಸಂಪುಟದಿಂದ ಕೈ ಬಿಡುವಂತೆ ಸಹಿ ಸಂಗ್ರಹ ಮಾಡಿದ್ದಾರೆ. : ----- --..