ಸರ್ಕಾರಕ್ಕೆ ಜನಹಿತಕ್ಕಿಂತ ಸ್ವಹಿತವೇ ಮುಖ್ಯ : ರಾಜ್ಯ ಕಾಂಗ್ರೆಸ್ ಟೀಕೆ ಬೆಂಗಳೂರು,ಏಪ್ರಿಲ್,02,2021(..): ಕರೋನಾ 2ನೇ ಅಲೆ ಹೆಚ್ಚಿದೆ. ಸರ್ಕಾರಕ್ಕೆ ದೂರು, ಪ್ರತಿದೂರಿನ ರಂಪಾಟದಲ್ಲಿ ಜನಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ. ಕಿತ್ತಾಟದಲ್ಲೇ ಮುಳುಗಿರುವ ಸರ್ಕಾರಕ್ಕೆ ರಾಜ್ಯದಲ್ಲಿನ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲವಾಗಿದೆ ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಬಿಜೆಪಿ ಸರ್ಕಾರದ ಕ್ರೋನಾಲಜಿ! ನೆರೆ ಬಂದಾಗ – ಸಂಪುಟವಿಲ್ಲದೆ ಪರದಾಟ ಕರೋನಾ ಬಂದಾಗ – ಕರೋನಾ ಲೂಟಿಗೆ ಕಿತ್ತಾಟ ಆರ್ಥಿಕ ಬಿಕ್ಕಟ್ಟಿನಲ್ಲಿ – ಖಾತೆ ಕಿತ್ತಾಟ ಬೆಲೆ ಏರಿಕೆಯ ಸಂದರ್ಭದಲ್ಲಿ – ಸಿಡಿ ಕಳ್ಳಾಟ ಇದೆ ಆಗಿದೆ ಎಂದು ಆಕ್ರೋಶವ್ಯಕ್ತಪಡಿಸಿದೆ. ಸಿಡಿ ಸರ್ಕಾರಕ್ಕೆ ಸಿಡಿ ಚಿಂತೆ, ಜನತೆಗೆ ಬದುಕು ಉಳಿಸಿಕೊಳ್ಳುವ ಚಿಂತೆ. ಹಲವು ದಿನಗಳಿಂದ ಸಾರಿಗೆ ನೌಕರರ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿದ್ದರೂ ಸಚಿವ ಲಕ್ಷ್ಮಣ್ ಸವದಿ ಕಣ್ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ದೂರಿದೆ. : -------