ಸಿಡಿ ಪ್ರಕರಣ, ತನಿಖೆ ಆರಂಭದಲ್ಲೇ ಬಂಧಿಸೋಕೆ ಆಗಲ್ಲ : ಡಿಜಿ, ಐಜಿಪಿ ಪ್ರವೀಣ್ ಸೂದ್ ಬೆಂಗಳೂರು,ಏಪ್ರಿಲ್,02,2021(..) :ತನಿಖೆ ಆರಂಭದಲ್ಲೇ ಬಂಧಿಸೋಕೆ ಆಗಲ್ಲ. ತನಿಖೆ ಪೂರ್ಣಗೊಂಡು ಬಂಧಿಸಿಲ್ಲ ಎಂದರೆ ಪ್ರಶ್ನಿಸಬೇಕು. ಹಂತ, ಹಂತವಾಗಿ ತನಿಖೆ ನಡೆಯುತ್ತಿದೆ ಎಂದು ಡಿಜಿ, ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಸುಧೀರ್ಘ ವಿಚಾರಣೆ ನಡೆಸಲಿದ್ದೇವೆ. ರಮೇಶ್ ಜಾರಕಿಹೊಳಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬೆಳಗ್ಗೆ 11ಕ್ಕೆ ಸಂತ್ರಸ್ತೆಯನ್ನು ಎಸಿಪಿ ಕವಿತಾ ವಿಚಾರಣೆ ನಡೆಸಲಿದ್ದಾರೆ ಎಂದರು. : ---- -, -