ಸಿಡಿ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸದಂತೆ ಸಿಎಂ ಒತ್ತಡ- ಯುವತಿ ಪರ ವಕೀಲ ಜಗದೀಶ್… ಬೆಂಗಳೂರು,ಏಪ್ರಿಲ್,1,2021(..):ಸಿಡಿ ಪ್ರಕರಣದಲ್ಲಿ ಗಂಭೀರ ಪ್ರಕರಣ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿಯನ್ನ ಸಿಎಂ ಪ್ರಚಾರಕ್ಕೆ ಕರೆದಿದ್ದಾರೆ. ಈ ಮೂಲಕ ಆರೋಪಿಯನ್ನ ಬಂಧಿಸದಂತೆ ಒತ್ತಡ ಹಾಕಿದ್ದಾರೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಯುವತಿ ಪರ ವಕೀಲ ಜಗದೀಶ್, ಎಸ್ ಐಟಿ ಅಧಿಕಾರಿಗಳು ನಾಳೆ ಆರೋಪಿಯನ್ನ ಬಂಧಿಸಲಿ. ನಾಳೆ ರಮೇಶ್ ಜಾರಕಿಹೊಳಿಯನ್ನವಿಚಾರಣೆಗೆ ಕರೆದಿದ್ದಾರೆ. ಈ ವೇಳೆ ರಮೇಶ್ ಜಾರಕಿಹೊಳಿಯನ್ನ ಬಂಧಿಸಲಿ ಎಂದು ಆಗ್ರಹಿಸಿದರು. ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಆದ್ರೆ ಆರೋಪಿಯನ್ನ ನಿರಪರಾಧಿಯನ್ನ ಸಿಎಂ ನೋಡ್ತಿದ್ದಾರೆ, ಗಂಭೀರ ಪ್ರಕರಣ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿಯನ್ನ ಪ್ರಚಾರಕ್ಕೆ ಕರೆದಿದ್ದಾರೆ. ಈ ಮೂಲಕ ಆರೋಪಿಯನ್ನ ಬಂಧಿಸದಂತೆ ಸಿಎಂ ಒತ್ತಡ ಹಾಕಿದ್ದಾರೆ ಎಂದು ವಕೀಲ ಜಗದೀಶ್ ಕುಮಾರ್ ಆರೋಪಿಸಿದ್ದಾರೆ. : - - – – --