ನನ್ನ ಹೆಸರು ಹೇಳಿದ್ರೆ ಅವರಿಗೆ ಮಾರ್ಕೆಟಿಂಗ್ ಆಗುತ್ತೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್… ಬೆಂಗಳೂರು,ಏಪ್ರಿಲ್,1,2021(..):ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನನ್ನ ಹೆಸರು ಹೇಳಿದ್ರೆ ಅವರಿಗೆ ಮಾರ್ಕೆಟಿಂಗ್ ಆಗುತ್ತೆ. ಹೀಗಾಗಿ ನನ್ನ ಹೆಸರು ಬಳಸಿಕೊಂಡಿದ್ದಾರೆ. ನನಗೂ ಸಿಡಿ ಕೇಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, , ಸಿಡಿ ವಿಚಾರ ಅಸಂಬದ್ಧ. ಅದು ನನಗೆ ಸಂಬಂಧ ಪಡದಿರುವ ವಿಚಾರ. ನನ್ನ ಹೆಸರು ಹೇಳಿದರೆ ಅವರಿಗೆ ಮಾರ್ಕೆಟಿಂಗ್ ಆಗುತ್ತೆ. ಅದಕ್ಕೆ ನನ್ನ ಹೆಸರು ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು. ರಾಜ್ಯದ ಇತಿಹಾಸದಲ್ಲಿ ಇದು ಮೊದಲ ಸಲ ಕ್ಯಾಬಿನೆಟ್ ಸಚಿವರು ಸಿಎಂ ಬಿಎಸ್ ವೈ ವಿರುದ್ಧ ಆರೋಪಿಸಿದ್ದಾರೆ. ತಿಪ್ಪೆ ಸಾರಿಸೋದು ಏನಿಲ್ಲಾ, ಸಿಎಂ ರಿಸೈನ್ ಮಾಡಬೇಕು. ಇಲ್ಲ ಆ ಸಚಿವರ ರಾಜೀನಾಮೆ ಪಡೆಯಬೇಕು. ಒಳಗೆ ಏನೇನು ಇದೆಯೋ, ಸಿಎಂ ರಾಜೀನಾಮೆ ಕೊಡಲಿ. ಇಲ್ಲಾ ಈಶ್ವರಪ್ಪನವರನ್ನ ತೆಗೆದು ಹಾಕಲಿ. ಕಾಂಗ್ರೆಸ್ ಇದರ ವಿರುದ್ದ ಹೋರಾಟ ಮಾಡುತ್ತೆ ಎಂದು ಹೇಳಿದರು. : – - - - - .