ಕನ್ನಡದಲ್ಲಿ ಟ್ವೀಟ್ ಮಾಡಿ ಆರ್ ಸಿಬಿ ಫ್ಯಾನ್ಸ್ ಮನ ಗೆದ್ದ ಚಾಹಲ್ ಬೆಂಗಳೂರು, ಏಪ್ರಿಲ್ 1, 2021 (..): ಕನ್ನಡದಲ್ಲಿ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಯಜುವೇಂದ್ರ ಚಾಹಲ್ ಗೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚೆನ್ನೈನಲ್ಲಿ ಆರ್ ಸಿಬಿ ತಂಡ ಕೂಡಿಕೊಂಡಿರುವ ಚಾಹಲ್, ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿದ್ದಾರೆ. ಈ ನಡುವೆ ಚಾಹಲ್ ಕನ್ನಡದಲ್ಲಿ ಮಾಡಿರುವ ಟ್ವೀಟ್ ಕಂಡು ಆರ್ ಸಿಬಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಆರ್ ಸಿಬಿ ಕುಟುಂಬದೊಂದಿಗೆ ಮತ್ತೆ ಒಂದಾಗಲು ನನಗೆ ತುಂಬಾ ಸಂತೋಷವಾಗಿದೆ! ಎಂದು ಕನ್ನಡದಲ್ಲೇ ಚಾಹಲ್ ಟ್ವೀಟ್ ಮಾಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.