ಕೋವಿಡ್ ಅಪಾಯ ನಿರ್ಲಕ್ಷಿಸದಿರಿ: 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಿ- ಸಿಎಂ ಬಿಎಸ್ ವೈ ಮನವಿ… ಬೆಂಗಳೂರು, ಏಪ್ರಿಲ್,1,2021(..):ರಾಜ್ಯದಲ್ಲಿ ಇತ್ತೀಚೆಗೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ನಾಗರಿಕ ಬಂಧುಗಳೇ, ಕೋವಿಡ್ ಅಪಾಯವನ್ನು ನಿರ್ಲಕ್ಷಿಸದಿರಿ. 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಇಂದಿನಿಂದ 45 ವರ್ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ನಾಗರಿಕ ಬಂಧುಗಳೇ, ಕೋವಿಡ್ ಅಪಾಯವನ್ನು ನಿರ್ಲಕ್ಷಿಸದಿರಿ. ಎಲ್ಲ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ. ಕೊರೋನಾ ವಿರುದ್ಧ ಲಸಿಕೆಯೇ ನಮ್ಮ ಸುರಕ್ಷಾ ಕವಚ. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಇಂದಿನಿಂದ ಲಸಿಕೆ ಪಡೆಯಬಹುದು, ನಿಮ್ಮ ಹತ್ತಿರದ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಳ್ಳಿ. ಜೊತೆಯಾಗಿ ನಾವೆಲ್ಲರೂ ಕೊರೋನಾ ಹಿಮ್ಮೆಟ್ಟಿಸೋಣ ಎಂದು ಮನವಿ ಮಾಡಿದ್ದಾರೆ. 45 , . 1, 2021 (..): .. 45 . 45 . .. . “ . 45 . ,” .: .. / / 45 / : - 45 – -