ಮಾಧ್ಯಮಗಳಿಗೆ ನಿರ್ಬಂಧ ಕೋರಿ 6 ಸಚಿವರು ಅರ್ಜಿ ಸಲ್ಲಿಕೆ ವಿಚಾರ: ಮೇ 29ರವರೆಗೆ ಮಧ್ಯಾಂತರ ಆದೇಶ ವಿಸ್ತರಿಸಿದ ಕೋರ್ಟ್… ಬೆಂಗಳೂರು,ಮಾರ್ಚ್,31,2021(..): ತಮ್ಮ ವಿರುದ್ದ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಕೋರಿ 6 ಸಚಿವರು ಅರ್ಜಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೇಯೋ ಹಾಲ್ ಕೋರ್ಟ್ ಮೇ 29ರವರೆಗೆ ಮಧ್ಯಾಂತರ ಆದೇಶ ವಿಸ್ತರಿಸಿದೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸುವಂತೆ ಕೋರಿ ಸಚಿವರಾದ ಎಸ್.ಟಿ ಸೋಮಶೇಖರ್, ಸುಧಾಕರ್, ಶಿವರಾಂ ಹೆಬ್ಬಾರ್,ಬಿ.ಸಿ ಪಾಟೀಲ್,ಭೈರತಿ ಬಸವರಾಜು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಮಾಧ್ಯಮಗಳಲ್ಲಿ ಪ್ರಸಾರಕ್ಕೆ ಕೊರ್ಟ್ ತಡೆ ನೀಡಿ ಮಧ್ಯಾಂತರ ಆದೇಶ ನೀಡಿತ್ತು. ಇದೀಗ ಬೆಂಗಳೂರಿನ ಮೇಯೋ ಹಾಲ್ ಕೋರ್ಟ್ ಮೇ 29ರವರೆಗೆ ಮಧ್ಯಾಂತರ ಆದೇಶ ವಿಸ್ತರಿಸಿದೆ. : 6 - – –- –- 29