ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿದ ಕಾಂಗ್ರೆಸ್ ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು…. ಬೆಂಗಳೂರು, ಮಾರ್ಚ್,31,2021(..):ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಮೇಶ್ ಜಾರಕಿಹೊಳಿಯನ್ನ ಬಂಧಿಸಿ ಎಂದು ಹೇಳಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರವಿದ್ದಾಗ ಮೇಟಿ ಕೇಸ್ ನಲ್ಲಿ ಏನು ಮಾಡಿತು ಎಂಬುದು ಗೊತ್ತಿದೆ. ಹೆಚ್ ವೈ ಮೇಟಿ ಕೇಸ್ ನಲ್ಲಿ ಎಫ್ ಐಆರ್ ಸಹ ಹಾಕಿರಲಿಲ್ಲ. ವಿಡಿಯೋ ಮಾಡಿದ್ದು ಯಾರು ಅಂತಾ ಸಹ ಕಂಡು ಹಿಡಿದಿರಲಿಲ್ಲ. ತನಿಖೆ ನಡೆಸದೇ ಕ್ಲೀನ್ ಚಿಟ್ ನೀಡಲಾಗಿತ್ತು.ಹೀಗಾಗಿ ಕಾಂಗ್ರೆಸ್ ಗೆ ರಮೇಶ್ ಜಾರಕಿಹೊಳಿಯನ್ನ ಬಂಧಿಸುವಂತೆ ಹೇಳಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ತನಿಖೆಯಲ್ಲಿ ನಾನು ಮಧ್ಯ ಪ್ರವೇಶಿಸಲ್ಲ. ಎಸ್ ಐಟಿ ಕಾನೂನು ಬದ್ಧವಾಗಿ ತನಿಖೆ ನಡೆಸುತ್ತಿದೆ. ರಮೇಶ್ ಜಾರಕಿಹೊಳಿ ಬಂಧನದ ಬಗ್ಗೆ ಎಸ್ ಐಟಿ ನಿರ್ಧಾರ ಮಾಡುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. …. ‘. ’ : , . 31, 2021 (..): ’ . , “ .. ’ . ’ , . . , ’ .”“ ’ . ,” .: / / / : - – – - - - .