ಗೌಪ್ಯಸ್ಥಳದಲ್ಲಿ ಜಡ್ಜ್ ಮುಂದೆ ಹೇಳಿಕೆ ನೀಡುತ್ತಿರುವ ಸಿಡಿ ಸಂತ್ರಸ್ತ ಯುವತಿ… ಬೆಂಗಳೂರು,ಮಾರ್ಚ್,30,2021(..) : ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ಜಡ್ಜ್ ಮುಂದೆ ಹಾಜರಾಗಿದ್ದಾರೆ. ಯುವತಿಯನ್ನ ಗೌಪ್ಯವಾಗಿ ಕರೆತಂದು ಜಡ್ಜ್ ಮುಂದೆ ಹಾಜರುಪಡಿಸಲಾಗಿದೆ. ಈ ನಡುವೆ ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಯುವತಿ ಹೇಳಿಕೆ ನೀಡುತ್ತಿದ್ದಾರೆ. ಹೇಳಿಕೆ ನೀಡುವಾಗ ಜಡ್ಜ್ ಹಾಗೂ ಮಹಿಳಾ ಟೈಪಿಸ್ಟ್ ಮತ್ತು ಯುವತಿ ಮೂವರು ಮಾತ್ರ ಉಪಸ್ಥಿತರಿದ್ದಾರೆ ಎನ್ನಲಾಗಿದೆ. ಹೇಳಿಕೆ ನೀಡುವಾಗ ಯಾರಿಗೂ ಪ್ರವೇಶವಿಲ್ಲ. ಇನ್ನು ಸಿಆರ್ ಪಿಸಿ 164ರಡಿ ಯುವತಿಯ ಹೇಳಿಕೆ ದಾಖಲು ಮಾಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯುವತಿ ಪರ ವಕೀಲ ಜಗದೀಶ್ ಕುಮಾರ್ ಬೆಂಗಳೂರು ಎಸಿಎಂಎಂ ಕೋರ್ಟ್ ಗೆ ಸಿಡಿ ಸಂತ್ರಸ್ತ ಯುವತಿ ಹಾಜರುಪಡಿಸಲಾಗಿದೆ. ಅರ್ಧಗಂಟೆ ಮೊದಲೇ ಯುವತಿ ಹಾಜರುಪಡಿಸಿದ್ದೇವೆ. ಈಗಾಗಲೇ ಜಡ್ಜ್ ಮುಂದೆ ಯುವತಿ ಹಾಜರಿದ್ದಾರೆ. ಗೌಪ್ಯವಾಗಿ ಹಾಜರುಪಡಿಸಬೇಕಿತ್ತು. ಹೀಗಾಗಿ ಯುವತಿ ಗೌಪ್ಯವಾಗಿ ಹಾಜರಾಗಿದ್ದಾರೆ ಎಂದರು. : - - - – – .