ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಏನು ಬೇಕಾದ್ರೂ ಹೇಳಲಿ- ಡಿ.ಕೆ ಶಿವಕುಮಾರ್… ಕಲ್ಬುರ್ಗಿ, ಮಾರ್ಚ್,30,2021(..):ತಮ್ಮ ವಿರುದ್ದ ಸಿಡಿ ಸಂತ್ರಸ್ತ ಯುವತಿಯ ಪೋಷಕರು ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಏನು ಬೇಕಾದ್ರೂ ಹೇಳಲಿ. ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಕಲ್ಬರ್ಗಿಯಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಯುವತಿ ಪೋಷಕರು ಅವರ ಅನುಕೂಲಕ್ಕೆ ಏನು ಬೇಕಾದರೂ ಹೇಳಲಿ. ನನಗೆ ಸಿಡಿ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಧಿವೇಶನದಲ್ಲಿ ಏನು ಹೇಳಬೇಕೋ ಅದನ್ನ ಹೇಳಿದ್ದೇನೆ. ಈಗ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು. ಇನ್ನು ತಮ್ಮ ಮೇಲೆ ಹಲ್ಲೆ ಯತ್ನ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ನಾವು ರಾಜಕೀಯದಲ್ಲಿರುವವರು ಇದು ಸಾಮಾನ್ಯ ಎಲ್ಲವನ್ನೂ ಎದುರಿಸಬೇಕು ಎಂದರು. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬಿಜೆಪಿ ವೈಪಲ್ಯಗಳಿಂದ ನಮಗೆ ಗೆಲುವು ಸಿಗಲಿದೆ. ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು. … “ ” – , . 30, 2021 (..): .. , ‘ , ’ .” , “ . ’ . . ’ .” .: / .. / / / : - - -