ಕಾಂಗ್ರೆಸ್ ನಲ್ಲಿರೋದು ಒನ್ ಫ್ಯಾಮಿಲಿ, ಒನ್ ನೇಷನ್- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ… ಬೆಳಗಾವಿ,ಮಾರ್ಚ್,30,2021(..):ಕಾಂಗ್ರೆಸ್ ನಲ್ಲಿರೋದು ಒನ್ ಫ್ಯಾಮಿಲಿ, ಒನ್ ನೇಷನ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು. ಮಾಧ್ಯಗಳ ಜತೆ ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಬೂತ್ ಮಟ್ಟದ ಕಾರ್ಯಕರ್ತರವರೆಗೆ ಚುನಾವಣೆ ನಡೆಸುವುದಿಲ್ಲ. ನಮ್ಮಲ್ಲಿ ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲರೂ ಚುನಾಯಿತರೇ. ಹೀಗಾಗಿ ಕಾಂಗ್ರೆಸ್ ನಲ್ಲಿರೋದು ಒನ್ ಫ್ಯಾಮಿಲಿ, ಒನ್ ನೇಷನ್. ಇಂತವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು. ಸಿದ್ದರಾಮಯ್ಯ ಸಿಎಂ, ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ. ಅವರು ಪ್ರಬುದ್ಧತೆಯಿಂದ ಮಾತನಾಡಬೇಕು ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು. ಇನ್ನು ಸಿಡಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಯುವತಿ ಒಂದು ರೀತಿಯ ಹೇಳಿಕೆ, ಯುವತಿಯ ಪೋಷಕರು ಒಂದು ರೀತಿಯ ಹೇಳಿಕೆ ನೀಡಿದ್ದಾರೆ. ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಿದರಷ್ಟೇ ಪ್ರಕರಣ ಇತ್ಯಾರ್ಥ ಸಾಧ್ಯ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು. : – - - - - .