ಸಿಡಿ ಪ್ರಕರಣ: ಸಂತ್ರಸ್ತ ಯುವತಿ ನೀಡಿದ್ಧ ದೂರು ಎಸ್ ಐಟಿಗೆ ವರ್ಗಾವಣೆ… ಬೆಂಗಳೂರು,ಮಾರ್ಚ್,30,2021(..):ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ಎಸ್ ಐಟಿಗೆ ವರ್ಗಾವಣೆ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ವಕೀಲ ಜಗದೀಶ್ ಮೂಲಕ ಮಾರ್ಚ್ 26 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಇದೀಗ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಎಸ್ ಐಟಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಇನ್ನು ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ಕವಿತಾ ಅವರನ್ನು ನೇಮಿಸಲಾಗಿದೆ. ಈ ಮಧ್ಯೆ ಪ್ರಕರಣ ಸಂಬಂಧ ಯುವತಿ ಹಾಜರಾಗಲು ಕೋರ್ಟ್ ಅನುಮತಿ ನೀಡಿದ್ದು ಯುವತಿ ಇಂದು ಕೋರ್ಟ್ ಮುಂದೆ ಹಾಜರಾಗುತ್ತಾರೆಯೇ ಕಾದು ನೋಡಬೇಕಿದೆ. …. : , . 30, 2021 (..): (), . , 26. . . , ’ .: / / / / : - - - -.