ಮೈಸೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ… ಮೈಸೂರು,ಮಾರ್ಚ್,30,2021(..):ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಸಿಸಿಬಿ ಪೊಲೀಸರು ಬಂಧಿಸಿ ಆತನ ಬಳಿ ಇದ್ದ ಮಾದಕ ವಸ್ತು, ನಗದು ಮತ್ತು ಮೊಬೈಲ್ ಅನ್ನ ವಶಕ್ಕೆ ಪಡೆದಿದ್ದಾರೆ. ಆಲನಹಳ್ಳಿಯ ನೇತಾಜಿನಗರದ ಸುಮೇರರಾಮ್ (35) ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 10,000 ರೂ ಬೆಲೆ ಬಾಳುವ ಮಾದಕ ವಸ್ತು, ಅಫೀಮಿನಿಂದ ಮಾಡಿರುವ 257 ಗ್ರಾಂ ತೂಕದ ಮಿಶ್ರಣ, 2100 ರೂ ನಗದು, 1 ಮೊಬೈಲ್ ಫೋನ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತಃ ರಾಜಸ್ಥಾನ ರಾಜ್ಯದವನಾದ ಆರೋಪಿ ಸುಮೇರರಾಮ್, ಮೈಸೂರು ಬೆಂಗಳೂರು ರಸ್ತೆಯ ಲಾಯಲ್ ವರ್ಲ್ಡ್ ಬಳಿ ಗಾಂಜಾ ಮಾರುತ್ತಿದ್ದ. ಈ ನಡುವೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ ಸಿಸಿಬಿ ಪೊಲೀಸರ ಕೈಗೆ ಆರೋಪಿ ಸುಮೇರರಾಮ್ ರೆಡ್ ಹ್ಯಾಂಡಾಗಿ ಮಾಲು ಸಮೇತ ಸಿಕ್ಕಿಬಿದ್ದನು. : - – - –