ನಟಿ ಪ್ರೇಮಾ ತಂದೆ ನಿಧನ: ಕೊಡಗಿನ ಸ್ವಗ್ರಾಮದಲ್ಲಿಂದು ಅಂತ್ಯಕ್ರಿಯೆ ಬೆಂಗಳೂರು, ಮಾರ್ಚ್ 30, 2021 (..):ನಟಿ ಪ್ರೇಮಾ ಅವರ ತಂದೆ ನೆರವಂಡ ಚೆಟ್ಟಿಚ್ಚ (75) ನಿಧನರಾಗಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನೆರವಂಡ ಚೆಟ್ಟಿಚ್ಚ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ನಿಧನರಾಗಿದ್ದಾರೆ. ನೆರವಂಡ ಚೆಟ್ಟಿಚ್ಚ ಅಂತ್ಯಕ್ರಿಯೆ ಇಂದು ಕೊಡಗಿನ ಮೂರ್ನಾಡು ಸಮೀಪದ ಕುಂಬಳದಾಳುವಿನಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರಿಗೆ ನಟಿ ಪ್ರೇಮ ಸೇರಿದಂತೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ ಇದ್ದಾರೆ.