ಸಿಡಿ ಯುವತಿ ವಿಚಾರದಲ್ಲಿ ಸಿಎಂ ಬಿ.ಎಸ್. ವೈ ಮೌನ ಸರಿಯಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ… ಬೆಂಗಳೂರು,ಮಾರ್ಚ್,29,2021(..): ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿ ವಿಚಾರದಲ್ಲಿ ಸಿಎಂ ಬಿಎಸ್ ವೈ ಮೌನ ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಡಿ ವಿಚಾರ ದೇಶಾದ್ಯಂತ ಬಾರಿ ಚರ್ಚೆಯಾಗುತ್ತಿದೆ. ಆದರೆ ಸಿಎಂ ಬಿಎಸ್ ವೈ ಮೌನ ಮಾತ್ರ ಮೌನ ವಹಿಸಿದ್ದಾರೆ. ಬಿಎಸ್ ವೈ ಮೌನವಾಗಿರೋದು ನೋಡಿದರೇ ಅವರಲ್ಲಿ ಹುಳುಕಿರುವಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಆ ಯುವತಿ ನಮ್ಮ ಬಳಿ ರಕ್ಷಣೆ ಕೊಡಿ ಅಂತಾ ಕೇಳಿಲ್ಲ. ರಕ್ಷಣೆ ಕೊಡಿಸಿ ಎಂದು ಕೇಳಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು. : - – – - -.