ಡಿಕೆ ಶಿವಕುಮಾರ್ ವಿರುದ್ಧ ಮತ್ತೆ ಸಿಡಿ ಯುವತಿಯ ಪೋಷಕರಿಂದ ಗಂಭೀರ ಆರೋಪ.. ಬೆಳಗಾವಿ,ಮಾರ್ಚ್,29,2021(..):ಸಿಡಿ ಗ್ಯಾಂಗ್ ಅಂಡ್ ಡಿಕೆ ಶಿವಕುಮಾರ್ ನನ್ನ ಮಗಳಿಂದ ಒತ್ತಾಯ ಪೂರ್ವಕ ಹೇಳಿಕೆ ನೀಡಿಸುತ್ತಿದ್ದಾರೆ. ನನ್ನ ಪುತ್ರಿಯನ್ನ ಒತ್ತಡದಿಂದ ಮುಕ್ತಿ ಮಾಡಬೇಕು ಎಂದು ಸಿಡಿ ಸಂತ್ರಸ್ತೆ ಯುವತಿಯ ಪೋಷಕರು ಮತ್ತೆ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಬೆಳಗಾವಿಯಲ್ಲಿ ಸಿಡಿ ಯುವತಿಯ ಪೋಷಕರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಯುವತಿಯ ತಂದೆ, ನನ್ನ ಮಗಳು ಒತ್ತಡದಲ್ಲಿದ್ದಾಳೆ ಹಾಗಾಗಿ ಈ ಪರಿಸ್ಥಿತಿಯಲ್ಲಿ ಆಕೆಯ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು. ನನ್ನ ಪುತ್ರಿಯನ್ನು ರಾಜಕೀಯ ದಾಳವಾಗಿ ಬಳಸಿದ್ದಾರೆ. ಮೊದಲು ನಮ್ಮ ಮಗಳು ಅಲ್ಲಿಂದ ಹೊರಬರಬೇಕು. ಆಕೆಯ ಮೇಲೆ ಡಿ.ಕೆ.ಶಿವಕುಮಾರ್ ಕಡೆಯವರು ಒತ್ತಡ ಹೇರಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಮೊದಲು ಅವಳು ಒತ್ತಡದಿಂದ ಹೊರಬಂದು ಹೇಳಿಕೆಗಳನ್ನು ದಾಖಲಿಸಲಿ. ನನ್ನ ಮಗಳು ಹೇಳಿಕೆ ನೀಡಲು ನಾಲ್ಕು ದಿನಗಳ ಕಾಲ ಕಾಲಾವಕಾಶ ನೀಡಲಿ ಎಂದು ಹೇಳಿದ್ದಾರೆ. ಮಗಳಿಗೆ ನಮ್ಮ ಜೊತೆ ಮಾತನಾಡಲು ಬಿಡುತ್ತಿಲ್ಲ. ನಾವು ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದೀವಿ. ನಾವು ಮಾನಸಿಕವಾಗಿ ಜರ್ಜರಿತವಾಗಿದ್ದಿವಿ. ನಾನು ಮಾಜಿ ಸೈನಿಕನಿರುವುದರಿಂದ ನನ್ನ ಮಗಳ ರಕ್ಷಣೆಗೆ ನಾನು ಬದ್ಧ. ಅವಳು ನಮ್ಮ ಬಳಿ ಇರಲು ಇಚ್ಚಿಸುವುದಾದರೆ ಅದೆಲ್ಲವನ್ನೂ ಬಿಟ್ಟು ನಮ್ಮ ಬಳಿ ಬರಲಿ. ನಾವು ಆಕೆಯನ್ನು ರಕ್ಷಿಸುತ್ತೇವೆ. ಒಂದು ವೇಳೆ ಅವಳು ನಮ್ಮ ಬಳಿ ಬರಲು ಇಚ್ಛಿಸುವುದಿಲ್ಲ ಎನ್ನುವುದಾದರೆ ಅದನ್ನು ಕೋರ್ಟ್ ಮುಂದೆ ಹೇಳಲಿ ನ್ಯಾಯಾಲಯವೇ ನಿರ್ಧರಿಸಲಿ ಎಂದು ಹೇಳಿಕೆ ನೀಡಿದ್ದಾರೆ. ಸಂತ್ರಸ್ತ ಯುವತಿಯ ಸಹೋದರ ಮಾತನಾಡಿ, ನಮ್ಮ ಅಕ್ಕನಿಗೆ ನಾಲ್ಕು ದಿನಗಳ ಕಾಲ ಸಮಯ ನೀಡಬೇಕು. ಒತ್ತಾಯ ಪೂರ್ವಕವಾಗಿ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. : -- – - -