“ಪಿರಿಯಾಪಟ್ಟಣದಲ್ಲಿ ವ್ಯಕ್ತಿಯ ಭೀಕರ ಹತ್ಯೆ” ಮೈಸೂರು,ಮಾರ್ಚ್,29,2021(..) :ಪಿರಿಯಾಪಟ್ಟಣದಲ್ಲಿ ಕೊಡಗಿನ ವ್ಯಕ್ತಿಯ ಭೀಕರ ಹತ್ಯೆಯಾಗಿದ್ದು, ನಾಪೋಕ್ಲು ಸಮೀಪದ ಕೊಟ್ಟಮುಡಿ ಜಮಾತ್ ಅಧ್ಯಕ್ಷರಾಗಿದ್ದ ಹ್ಯಾರಿಸ್ (60) ಹತ್ಯೆಗೊಳಗಾದ ವ್ಯಕ್ತಿಯಾಗಿದ್ದಾರೆ. ಪಿರಿಯಾಪಟ್ಟಣ ಸಮೀಪದ ಚೌಡನ ಹಳ್ಳಿಯಲ್ಲಿ ರಾತ್ರಿ ಘಟನೆ ನಡೆದಿದ್ದು, ಅಡಿಕೆ ವ್ಯಾಪಾರಿಯಾಗಿದ್ದ ಹ್ಯಾರಿಸ್ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಪರಿಚಿತರಿಂದಲೇ ಹತ್ಯೆಯಾಗಿರುವ ಶಂಕೆವ್ಯಕ್ತವಾಗಿದ್ದು, ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. : ---