ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ. ಹುಬ್ಬಳ್ಳಿ,ಮೇ,17,2024 (..):ಹುಬ್ಬಳ್ಳಿಯಲ್ಲಿ ದುಷ್ಕರ್ಮಿ ಮನೆಗೆ ನುಗ್ಗಿ ಅಂಜಲಿ ಎಂಬ ಯುವತಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಹಾಗೂ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂರ್ಪೂರ್ಣ ಕುಸಿದಿದೆ. ಜನರ ನೆಮ್ಮದಿಯನ್ನ ಸರ್ಕಾರ ಕೆಡಿಸಿದೆ. ಘಟನ ಸ್ಥಳಕ್ಕೆ ಗೃಹ ಸಚಿವರು ಯಾಕೆ. ಪೊಲೀಸರನ್ನ ಅಮಾನತು ಮಾಡುವ ನಾಟಕವನ್ನ ಬಿಡಿ ಎಂದು ಕಿಡಿಕಾರಿದರು. : – – -