“ಡಿ.ಕೆ.ಶಿ ವಾಸ್ತವ್ಯ ಹೂಡಿರುವ ಹೋಟೆಲ್ ಗೆ ಬಿಗಿ ಬಂದೋಬಸ್ತ್” : ಸಂಜೆ ಬೈ ಎಲೆಕ್ಷನ್ ಕುರಿತು ಚರ್ಚೆ ಬೆಳಗಾವಿ,ಮಾರ್ಚ್,28,2021(..) :ಬೈ ಎಲೆಕ್ಷನ್ ಹಿನ್ನೆಲೆ ಬೆಳಗಾವಿಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಜೆ ಪಕ್ಷದ ಆಯ್ದ ಕೆಲವು ಮುಖಂಡರೊಂದಿಗೆ ಕಾಂಗ್ರೆಸ್ ಭವನದಲ್ಲಿ ಚುನಾವಣೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ. ಪೊಲೀಸ್ ಬಿಗಿಬಂದೋಬಸ್ತ್ ನಡುವೆ ಏರ್ ಪೋರ್ಟ್ ನಿಂದ ಹೋಟೆಲ್ ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ ಗೆ ಆಗಮಿಸುವ ಮುನ್ನ ನಗರದ ಪ್ರವೇಶದ್ವಾರದಲ್ಲಿ ಡಿ.ಕೆ.ಶಿ ಕಾರ್ ಅನ್ನು ತಡೆದ ರಮೇಶ್ ಬೆಂಬಲಿಗರು ಕಾರಿಗೆ ಗುದ್ದಿ, ಆವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. : ------