ನಾಳೆಯಿಂದ ಎಸ್ ಐ ಟಿ ಕಚೇರಿ ಎದುರು ಪ್ರತಿಭಟನೆ : ಕಾಂಗ್ರೆಸ್ ಮುಖಂಡ ಮಿಥುನ್ ರೈ ಬೆಂಗಳೂರು,ಮಾರ್ಚ್,28,2021(..) :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಎಸ್ ಐ ಟಿ ರಕ್ಷಣೆ ನೀಡುತ್ತಿದ್ದು, ಅವರು ಎಸ್ ಐ ಟಿ ಯನ್ನು ತಮ್ಮ ಕೈಗೊಂಬೆಯನ್ನಾಗಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಬಂಧಿಸುವವರೆಗೆ ನಾಳೆಯಿಂದ ಎಸ್ ಐ ಟಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದರು. ತನಿಖೆಯ ಹಾದಿ ತಪ್ಪಿಸುವ ಕಾರ್ಯಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ. 25 ದಿನಗಳ ನಂತರ ಜಾರಕಿಹೊಳಿ ಪ್ರಭಾವ ಬಳಸಿ ಬೆದರಿಕೆ ಹಾಕಿ, ಯುವತಿಯ ಕುಟುಂಬದವರಿಂದ ಹೇಳಿಕೆ ಕೊಡಿಸಿದ್ದಾರೆ ಎಂದು ದೂರಿದರು. : - ----