ಇಂಡಿಯಾ-ಇಂಗ್ಲೆಂಡ್ ಓಡಿಐ: ನಿರ್ಣಾಯಕ ಫೈನಲ್ ಪಂದ್ಯ ಇಂದು ಬೆಂಗಳೂರು, ಮಾರ್ಚ್ 28, 2021 (..):ಇಂದು ಟೀಂ ಇಂಡಿಯಾ, ಇಂಗ್ಲೆಂಡ್ ಗೆ ನಡುವಿನ ಏಕದಿನ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಏಕದಿನ ಪಂದ್ಯ ನಡೆಯಲಿದೆ. ಎರಡು ಪಂದ್ಯಗಳಿಂದ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿರುವ ಕಾರಣ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ. ಭಾರತ ಈ ಪಂದ್ಯಕ್ಕೆ ಬೌಲರ್ ಗಳ ಬದಲಾವಣೆ ಮಾಡುವ ಸಾಧ್ಯತೆಯಿದೆ. ಕುಲದೀಪ್ ಯಾದವ್ ಹೊರಗಿಟ್ಟು ಯಜುವೇಂದ್ರ ಚಾಹಲ್ ಮತ್ತೆ ತಂಡಕ್ಕೆ ವಾಪಸಾಗಬಹುದು. ಮಧ‍್ಯಾಹ್ನ 1.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.