“ಸರ್ಕಾರ ತೆಗೆಯುವ, ಹುಟ್ಟು ಹಾಕುವ ಶಕ್ತಿ ರಮೇಶ್ ಜಾರಕಿಹೊಳಿಗೆ ಇದೆ” : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರು,ಮಾರ್ಚ್,28,2021(..) :ಸಿಡಿ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸರ್ಕಾರ ತೆಗೆಯುವ, ಹುಟ್ಟು ಹಾಕುವ ಶಕ್ತಿ ರಮೇಶ್ ಜಾರಕಿಹೊಳಿ ಅವರಿಗಿದೆ. ಕಾನೂನು ಇದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಯುವತಿಗೂ ನನಗೂ ಸಂಬಂಧವಿಲ್ಲ. ನನ್ನನ್ನು ಭೇಟಿಯಾಗಿಲ್ಲ. ಮಾಧ್ಯಮಗಳ ಮೂಲಕ ಸಹಾಯ ಮಾಡಿ ಎಂದಿದ್ದಾಳೆ ಅಷ್ಟೇ. ಮಹಾನಾಯಕ, ಶೋಮ್ಯಾನ್ ಸೇರಿದಂತೆ ಅವಾಚ್ಯವಾಗಿ ಮಾತನಾಡಿದ್ದಾರೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕನಕಪುರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದೀರಿ. ಸಂತೋಷ. ಸ್ವಾಗತಿಸುತ್ತೇನೆ ಎಂದಿದ್ದಾರೆ. ಏನು ಬೇಕಾದರೂ ಹೇಳಲಿ. ಕೇಸ್ ದಾಖಲಿಸಲಿ. ಎಸ್ ಐ ಟಿ ತನಿಖೆ ನಡೆಸುತ್ತಿದೆ. ಕಾನೂನು ಇದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ತಿಳಿಸಿದ್ದಾರೆ. : ---- ---..