ರಮೇಶ್ ಜಾರಕಿಹೊಳಿಯಿಂದ ಬೆದರಿಕೆ: ಹೈಕೋರ್ಟ್ ಮೊರೆ ಹೋಗಲು ಚಿಂತನೆ- ಯುವತಿ ಪರ ವಕೀಲ ಜಗದೀಶ್…. ಬೆಂಗಳೂರು,ಮಾರ್ಚ್,27,2021(..): ನಿನ್ನೆ ದೂರು ನೀಡಿ ಎಫ್ ಐಆರ್ ಆದ ಬಳಿಕ ರಮೇಶ್ ಜಾರಕಿಹೊಳಿ ಅವರಿಂದ ಬೆದರಿಕೆ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಸೋಮವಾರ ಹೈಕೊರ್ಟ್ ಮೊರೆ ಹೋಗುವ ಚಿಂತನೆ ಇದೆ ಎಂದು ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಜಗದೀಶ್, ಯುವತಿ ಹೇಳಿಕೆ ಆಧರಿಸಿ ನಾನು ದೂರು ನೀಡಿದ್ದೇನೆ. ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯ ವ್ಯಕ್ತಿ ವಿರುದ್ಧ ಈ ಪ್ರಕರಣ ದಾಖಲಾಗಿದ್ದರೆ ಇಷ್ಟರಲ್ಲಿ ಬಂಧನವಾಗುತ್ತಿದ್ದರು. ಆದರೆ, ಜಾರಕಿಹೊಳಿಯನ್ನು ಯಾಕೆ ಬಂಧಿಸಿಲ್ಲ. ನಾನು ಬೆಂಗಳೂರು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಜಾರಕಿಹೊಳಿಯನ್ನು ಬಂಧಿಸದಿದ್ದರೆ, ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಜಗದೀಶ್ ಹೇಳಿದ್ದಾರೆ. : - - - -