ಕನ್ನಡ ಕಾಯಕ ವರ್ಷ ಅಂದರೆ, ಕನ್ನಡದಲ್ಲಿ ಮಾಹಿತಿ ನೀಡದಿರುವುದೇ? : ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಬೆಂಗಳೂರು,ಮಾರ್ಚ್,26,2021(..) :ಕರೋನಾ ಬಗೆಗಿನ ಬಹುತೇಕ ಮಾಹಿತಿಗಳು ಹೆಚ್ಚಾಗಿ ಇಂಗ್ಲೀಷ್ ನಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದಂತೆ ಕಾಣುತ್ತಿದೆ. ಕನ್ನಡ ಕಾಯಕ ವರ್ಷ ಅಂದರೆ, ಕನ್ನಡದಲ್ಲಿ ಮಾಹಿತಿ ನೀಡದಿರುವುದೇ ಎಂದು ಸಿಎಂ ಬಿ.ಎಸ್.ವೈ ಅವರನ್ನು ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಪ್ರಶ್ನಿಸಿದ್ದಾರೆ. ಕರೋನಾ ಬಗೆಗಿನ ಮಾಹಿತಿ ಇಂಗ್ಲೀಷ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದಕ್ಕೆ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದ್ದು, ಬಿ.ಎಸ್.ಯಡಿಯೂರಪ್ಪ ಅವರೇ? ದಯವಿಟ್ಟು ನಿಮ್ಮ ಅಧಿಕಾರಿಗಳನ್ನೇಲ್ಲಾ ಇಂಗ್ಲೆಂಡ್ ಗೆ ಕಳುಹಿಸಿಬಿಡಿ ಎಂದು ಟೀಕಿಸಿದ್ದಾರೆ. : -- ---- ?---