ಆಕೆ ಯಾವ ಕೇಸ್ ದಾಖಲಿಸುತ್ತಾರೋ ದಾಖಲಿಸಲಿ: ಎದುರಿಸಲು ಸಿದ್ಧ- ರಮೇಶ್ ಜಾರಕಿಹೊಳಿ…. ಮೈಸೂರು,ಮಾರ್ಚ್,26,2021(..): ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ದೂರು ನೀಡಲು ಮುಂದಾಗಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆ ಯುವತಿ ಯಾವ ಕೇಸ್ ದಾಖಲಿಸುತ್ತಾರೋ ದಾಖಲಿಸಲಿ ಎದುರಿಸಲು ಸಿದ್ದನ್ನಿದ್ದೇನೆ ಎಂದಿದ್ದಾರೆ. ಈ ಕುರಿತು ಇಂದು ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ವಕೀಲರನ್ನ ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಆ ಯುವತಿ ಯಾವ ಕೇಸ್ ದಾಖಲಿಸುತ್ತಾರೋ ದಾಖಲಿಸಲಿ ಎದುರಿಸಲು ಸಿದ್ದನ್ನಿದ್ದೇನೆ. ಜಗತ್ತಿಗೆ ತನ್ನ ಬೆತ್ತಲೆ ಫೋಟೊ ಪ್ರದರ್ಶಿಸಿರುವ ಯುವತಿ ನನ್ನ ವಿರುದ್ದ ಹೇಳಿಕೆ ಕೋಡುವುದು ದೊಡ್ಡ ವಿಷಯವಲ್ಲ. ಆಕೆ ದೂರು ಕೊಡಲಿ ಎದುರಿಸಲು ಸಿದ್ಧ. ಕಾನೂನು ಮೂಲಕ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಯುವತಿ ಅಂದೇ ಹೊರಗೆ ಬಂದು ದೂರು ದಾಖಲಿಸಬೇಕಿತ್ತು. ಈಗ ವಕೀಲರ ಮೂಲಕ ದೂರು ದಾಖಲಿಸುತ್ತಿದ್ದಾಳೆ. ಇದೆಲ್ಲವೂ ಒಂದು ಷಡ್ಯಂತ್ರ ಎಂದು ನಾನು ಅಂದೇ ಹೇಳಿದ್ದೇನೆ ಎಂದರು. : --- - -