ಏ.1ರಂದು ಅಮೆರಿಕಾದಲ್ಲೂ ‘ಯುವರತ್ನ’ ರಿಲೀಸ್ ಬೆಂಗಳೂರು, ಮಾರ್ಚ್ 26, 2021 (..):ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಅಮೆರಿಕಾದಲ್ಲೂ ಬಿಡುಗಡೆಯಾಗಲಿದೆ. ಏಪ್ರಿಲ್ 1 ರಂದೇ ವೀಕೆಂಡ್ ಸಿನಿಮಾಸ್ ಸಂಸ್ಥೆ ಉತ್ತರ ಅಮೆರಿಕಾದಲ್ಲಿ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಸುಮಾರು 400 ಥಿಯೇಟರ್ ಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ 200 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.