ನಟ ಮಾಧವನ್ ಕೊರೊನಾ ಸೋಂಕು ದೃಢ ಬೆಂಗಳೂರು, ಮಾರ್ಚ್ 26, 2021 (..):ನಟ ಮಾಧವನ್ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಈ ವಿಷಯವನ್ನು ಅವರೇ ಖಚಿತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿರುವ ಮಾಧವನ್, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅಂದಹಾಗೆ ಪ್ರಸ್ತುತ ‘ರಾಕೆಟ್ರಿ’ ಚಿತ್ರದ ಮೂಲಕ ಮಾಧವನ್ ನಿರ್ದೇಶನ ರಂಗಕ್ಕೆ ಪ್ರವೇಶಿಸಿದ್ದಾರೆ. ಇದು ಖ್ಯಾತ ವಿಜ್ಞಾನಿ ನಂಬಿ ನಾರಾಯಣ್ ಅವರ ಜೀವನಾಧಾರಿತ ಚಿತ್ರವಾಗಿದೆ.