“ರಾಜಕಾಲುವೆ(ಕೆ-100) ಜಲ‌ಮಾರ್ಗವಾಗಿ ಅಭಿವೃದ್ಧಿಪಡಿಸುವ ಯೋಜನೆ” : ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ಬೆಂಗಳೂರು,ಮಾರ್ಚ್,25,2021(..) :ಬೆಂಗಳೂರು ನಗರದ ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗಿನ ಕೋರಮಂಗಲ ರಾಜಕಾಲುವೆಯನ್ನು (ಕೆ-100) ಜಲ‌ಮಾರ್ಗವಾಗಿ ಅಭಿವೃದ್ಧಿಪಡಿಸುವ ಹಾಗೂ ಸುಂದರೀಕರಣಗೊಳಿಸುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು.ಇದು 175 ಕೋಟಿ ರೂ. ಮೊತ್ತದ ಯೋಜನೆಯಾಗಿದ್ದು, 10 ತಿಂಗಳಲ್ಲಿ ಪೂರ್ಣವಾಗಲಿದೆ. ತ್ಯಾಜ್ಯ ನೀರನ್ನು ರಾಜಕಾಲುವೆಯಿಂದ ಬೇರ್ಪಡಿಸುವುದು. ಶುದ್ಧೀಕರಿಸಿದ ನೀರು ಹರಿಯಲು 5 ಎಂಎಲ್ ಡಿ ಎಸ್ ಟಿಪಿ ನಿರ್ಮಾಣ. ಕಾರಂಜಿ, ಪಾದಚಾರಿ ಮಾರ್ಗ ನಿರ್ಮಾಣ, ಸಿಸಿಟಿವಿ ಕ್ಯಾಮರಾ‌‌ ಅಳವಡಿಕೆ,‌ ಹಸಿರು ವಾತಾವರಣ ಸೃಷ್ಟಿ. ಇದೆಲ್ಲವನ್ನೂ ಯೋಜನೆ ಒಳಗೊಂಡಿದೆ. ಕೆಎಸ್ಆರ್ ಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಇತರರು ಉಪಸ್ಥಿತರಿದ್ದರು. : (-100)----..