ದೇಶದಲ್ಲಿ ರೂಪಾಂತರಿ ಕೊರೋನಾ ವೈರಸ್: ಜನರು ಎಚ್ಚರಿಕೆಯಿಂದ ಇರಿ- ಸಚಿವ ಸುಧಾಕರ್ ಬೆಂಗಳೂರು,ಮಾರ್ಚ್,25,2021(..):ದೇಶದಲ್ಲಿ ರೂಪಾಂತರಿ ಕೊರೋನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದ್ದು, ಅದು ವೇಗವಾಗಿ ಹರಡುತ್ತದೆ, ಹೀಗಾಗಿ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಮಾಧ್ಯಮದ ಜತೆ ಇಂದು ಮಾತನಾಡಿದ ಸಚಿವ ಸುಧಾಕರ್, ರಾಜ್ಯದ ಜನರು ಎಚ್ಚರಿಕೆಯಿಂದ ಇರಿ, ನಿರ್ಲಕ್ಷ್ಯ ಮಾಡಬೇಡಿ. ದಿನದಿಂದ ದಿನಕ್ಕೆ ಕೊರೋನಾ ವೈರಸ್ ಹೆಚ್ಚಳವಾಗುತ್ತಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ದೇಶಕ್ಕೆ ರೂಪಾಂತರಿ ಕೊರೋನಾ ವೈರಸ್ ವಕ್ಕರಿಸಿದೆ. 700 ಕ್ಕೂ ಹೆಚ್ಚು ರೂಪಾಂತರಿ ಕೊರೊನಾ ವೈರಸ್ ಗಳು ದಾಖಲಾಗಿವೆ. ರೂಪಾಂತರಿ ಕೊರೊನಾ ವೈರಸ್ ವೇಗವಾಗಿ ಹರಡುತ್ತೆ. ಹೀಗಾಗಿ ಜನರು ಇನ್ನು 2 ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು.ಕೆಮ್ಮು , ನೆಗಡಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೇ ತಕ್ಷಣ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿ ಎಂದು ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ. ಚಿತ್ರರಂಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಥಿಯೇಟರ್ ಗಳಲ್ಲಿ ಶೇ50ರಷ್ಟು ಭರ್ತಿ ಕುರಿತು ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಚಿತ್ರನಟರು ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಜನರಲ್ಲಿ ಕೊರೋನಾ ತಡೆಗೆ ಜಾಗೃತಿ ಮೂಡಿಸಲು ಮುಂದಾಗಬೇಕು. ತಾವೆ ರಾಯಭಾರಿಗಳಾಗಬೇಕು ಎಂದರು. ಜನರು ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕು ಚುನಾವಣೆ ರ್ಯಾಲಿಯಲ್ಲೂ ನಿಯಮ ಪಾಲಿಸಬೇಕು . ಉಪಚುನಾವಣೆಗೆ ಸ್ಪಷ್ಟ ಮಾರ್ಗಸೂಚಿ ಸಂಬಂಧ ಚರ್ಚೆಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು. ….. , . 25, 2021 (..): . . , -19 . . “ . 700 . . , . ,” . , , 50% . “ . , -19 ,” .: . . / / -19 / / : - – - - –- -.