“ನಮ್ಮ ಬಡಿದಾಟಗಳಲ್ಲಿ ಹೆಂಡತಿ, ಮಕ್ಕಳ ತರುವುದು, ನಾವೇ ಮಾಡಿಕೊಂಡ ಅಪಮಾನ” : ಶಾಸಕ ಸಾರಾ.ಮಹೇಶ್ ಬೆಂಗಳೂರು,ಮಾರ್ಚ್,25,2021(..) :ನಾವು ರಾಜಕೀಯದಲ್ಲಿರುವವರು. ಬಡಿದಾಡುತ್ತೇವೆ, ಬೈದಾಡಿಕೊಳ್ಳುತ್ತೇವೆ. ಆದರೆ, ನಮ್ಮ ಬಡಿದಾಟಗಳಲ್ಲಿ ಹೆಂಡತಿ, ಮಕ್ಕಳನ್ನು ತರುವುದು ನಮ್ಮ ನಮ್ಮ ಕುಟುಂಬಗಳಿಗೆ ನಾವೇ ಮಾಡಿಕೊಂಡ ಅಪಮಾನ ಎಂದು ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡತರುವುದು ವಂಚನೆಯೇ ಸರಿ. ನಮ್ಮನ್ನೇ ನಂಬಿದ ಕುಟುಂಬಸ್ಥರಿಗೆ ಎಂದಿಗೂ ಅಪಮಾನವಾಗಬಾರದು‌ ಎಂದಿದ್ದಾರೆ. ಸಮಾಜವನ್ನೇ ಶಂಕೆಗೆ ದೂಡಿದವರು ತಾವು ಸೃಷ್ಟಿ ಮಾಡಿದ ಅನಾಹುತದ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೇಳಿಕೆ ತಮ್ಮದೇ ಕುಟುಂಬದಲ್ಲಿ ಸೃಷ್ಟಿ ಮಾಡಿರಬಹುದಾದ ಅಪನಂಬಿಕೆಯನ್ನು ಒಮ್ಮೆ ಗಮನಿಸಬೇಕು. ಸಮಾಜದ ಡೊಂಕು ಪ್ರಶ್ನಿಸಿದವರು ತಮ್ಮ ಕುಟುಂಬದ ದೃಷ್ಟಿಯಲ್ಲಿ ದೊಡ್ಡವರಾದರೋ? ಸಣ್ಣವರಾದರೋ? ನಂಬಿಕೆ ಉಳಿಸಿಕೊಂಡರೋ, ಕಳೆದುಕೊಂಡರೋ? ಎಂದು ಪ್ರಶ್ನಿಸಿದ್ದಾರೆ. : -------..