ಏಕಪತ್ನಿ ವ್ರತಸ್ಥರೇ ಎಂಬ ಸಚಿವ ಡಾ.ಕೆ ಸುಧಾಕರ್ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ..? ಬೆಂಗಳೂರು,ಮಾರ್ಚ್,24,2021(..):ಏಕಪತ್ನಿ ವ್ರತಸ್ಥರೇ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇಲ್ಲಿ ಎಲ್ಲರ ಮನೆಯ ದೋಸಿಯೂ ತೂತೆ. ಸಚಿವರಾಗಿ ಸುಧಾಕರ್ ಇಂತಹ ಹೇಳಿಕೆ ಕೊಡಬಾರದು ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನು ಒಂದು ಬಾರಿ ಜೀವನದಲ್ಲಿ ತಪ್ಪು ಮಾಡಿದ್ದೇನೆ. ನನ್ನ ತಪ್ಪನ್ನು ನಾನು ಈಗಾಗಲೇ ಒಪ್ಪಿಕೊಂಡಿದ್ದೇನೆ. ಇದೇ ವಿಚಾರವನ್ನು ಸದನದಲ್ಲೂ ತಿಳಿಸಿದ್ದೇನೆ. ಇಲ್ಲಿ ಎಲ್ಲರ ಮನೆಯ ದೋಸೆಯೂ ತೂತೆ ಎಂದು ಟಾಂಗ್ ನೀಡಿದರು. ಹಾಗೆಯೇ ಇಲ್ಲಿ ನನ್ನ ಹೆಸರು ಯಾಕೆ ತಂದರು ಗೊತ್ತಿಲ್ಲ ಎಂದ ಹೆಚ್.ಡಿ ಕುಮಾರಸ್ವಾಮಿ, ಸಚಿವರಾಗಿ ಮಾಡೋದಕ್ಕೆ ಕೆಲಸ ಬಹಳ ಇರುತ್ತದೆ. ರಾಜ್ಯದ ಜನರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆ ಬಗ್ಗೆ ಗಮನ ಕೊಡಬೇಕು. ಇದು ಸಚಿವರ ಜವಾಬ್ದಾರಿಯಾಗಿದೆ. ಇಂತಹ ಹೇಳಿಕೆ ಕೊಡೋ ಮೊದಲು ಯೋಚಿಸಬೇಕಿತ್ತು. ಜವಾಬ್ದಾರಿಯುತ ಸಚಿವರಾಗಿ ಹೀಗೆ ಹೇಳಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. : - - – - .