ಸುಧಾಕರ್ ಅವರೇ ತಾವು ಏಕಪತ್ನಿ ವ್ರತಸ್ಥರಾಗಿದ್ದೀರಾ..? ಹಾಗಾದ್ರೆ ಕೋರ್ಟ್ ಗೆ ಹೋಗಿದ್ದೇಕೆ..?- ರಾಜ್ಯ ಕಾಂಗ್ರೆಸ್ ಟಾಂಗ್… ಬೆಂಗಳೂರು,ಮಾರ್ಚ್,24,2021(..):ರಾಜ್ಯದ 224 ಶಾಸಕರ ವಿರುದ್ಧವೂ ತನಿಖೆಯಾಗಲಿ. ಯಾರು ಸತ್ಯ ಹರಿಶ್ಚಂದ್ರ, ಯಾರು ಶ್ರೀರಾಮಚಂದ್ರ, ಯಾರು ಏಕಪತ್ನಿ ವ್ರತಸ್ತ ಎಂಬುದು ತನಿಖೆಯಿಂದ ತಿಳಿಯಲಿ ಎಂದು ಸವಾಲು ಹಾಕಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ರಾಜ್ಯ ಕಾಂಗ್ರೆಸ್ ಟಾಂಗ್ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸಚಿವ ಸುಧಾಕರ್ ಅವರೇ. ತಾವು ಏಕಪತ್ನಿ ವ್ರತಸ್ಥರಾಗಿದ್ದೀರಾ.? ಹಾಗಿದ್ದರೆ ಕೋರ್ಟಿಗೆ ಹೋಗಿ ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ಏಕೆ ತಂದಿದ್ದೀರಿ? ಅದರ ತನಿಖೆಗೂ ಒಂದು ತಂಡ ರಚಿಸಿಬಿಡಿ ಸ್ವಾಮಿ ಎಂದು ತಿರುಗೇಟು ನೀಡಿದೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ್ದ ಸಚಿವ ಡಾ.ಕೆ.ಸುಧಾಕರ್, ಮಾಜಿ ಸಿಎಂ ಸಿದ್ಧರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ, ರಮೇಶ್ ಕುಮಾರ್, ಡಿಕೆ ಶಿವಕುಮಾರ್ ಏನು ಸತ್ಯಹರಿಶ್ಚಂದ್ರರಾ..? ತನಿಖೆ ಆಗುವುದಾದರೇ ಎಲ್ಲಾ 225 ಶಾಸಕರ ಬಗ್ಗೆಯೂ ತನಿಖೆ ಆಗಲಿ. ಯಾರು ಸತ್ಯ ಹರಿಶ್ಚಂದ್ರ, ಯಾರು ಶ್ರೀರಾಮಚಂದ್ರ ಎಂಬುದು ತನಿಖೆಯಿಂದ ತಿಳಿಯಲಿ. ಯಾರ್ ಏಕ ಪತ್ನಿ ವ್ರತಸ್ತ ಎನ್ನುವ ಬಗ್ಗೆ ರಾಜ್ಯದ ಜನರಿಗೂ ತಿಳಿಯಲಿ ಎಂಬುದಾಗಿ ಸವಾಲು ಹಾಕಿದ್ದರು. : - – -- -.