ಕುಡಿದ ಮತ್ತಿನಲ್ಲಿ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು…. ಮೈಸೂರು,ಮಾರ್ಚ್,24,2021(..):ಕುಡಿದ ಮತ್ತಿನಲ್ಲಿ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಅರವಿಂದನಗರದಲ್ಲಿ ಈ ಘಟನೆ ನಡೆದಿದೆ. ರಾಜೇಶ್(32) ಮೃತಪಟ್ಟ ವ್ಯಕ್ತಿ. ರಾಜೇಶ್ ವೃತ್ತಿಯಲ್ಲಿ ಖಾಸಗಿ ಕಾರ್ ಡ್ರೈವರ್ ಆಗಿದ್ದು, ನಿನ್ನೆ ರಾತ್ರಿ ಪಾನಮತ್ತನಾಗಿದ್ದನು. ಈ ನಡುವೆ ಸ್ಮೋಕ್ ಮಾಡಲು ಮೂರನೇ ಮಹಡಿಗೆ ತೆರಳಿದ್ದ ರಾಜೇಶ್ ಈ ವೇಳೆ ಆಯತಪ್ಪಿ ಕೆಳಬಿದ್ದು ಸಾವನ್ನಪ್ಪಿದ್ದಾನೆ. ರಾಜೇಶ್ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ತವರು ಮನೆ ಸೇರಿದ್ದಾರೆ. ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – - – -