ಸಿದ್ಧರಾಮಯ್ಯ, ಹೆಚ್.ಡಿಕೆ, ಡಿಕೆಶಿ ಏನ್ ಸತ್ಯಹರಿಶ್ಚಂದ್ರರಾ..? ಎಲ್ಲರ ವಿರುದ್ದವೂ ತನಿಖೆಯಾಗಲಿ- ಸಚಿವ ಸುಧಾಕರ್ ಓಪನ್ ಚಾಲೆಂಜ್ ಬೆಂಗಳೂರು,ಮಾರ್ಚ್,24,2021(..):ಮಾಜಿ ಸಿಎಂ ಸಿದ್ಧರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಏನ್ ಸತ್ಯಹರಿಶ್ಚಂದ್ರರಾ..? ಎಲ್ಲಾ 224 ಶಾಸಕರ ವಿರುದ್ದವೂ ತನಿಖೆಯಾಗಲಿ. ಎಲ್ಲರ ಬಂಡವಾಳ ಬಯಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಓಪನ್ ಚಾಲೇಂಜ್ ಹಾಕಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ನಾನು ಸೇರಿದಂತೆ 224 ಶಾಸಕರ ವಿರುದ್ದವೂ ತನಿಖೆಯಾಗಲಿ. ಎಲ್ಲಾ ಸಚಿವರು, ಶಾಸಕರ ವಿರುದ್ಧವೂ ತನಿಖೆಯಾಗಲಿ.ಯಾರಿಗೆ ಅನೈತಿಕ ಸಂಬಂಧ ಇದೆ ಎಂದು ತನಿಖೆಯಾಗಲಿ. ಜನರಿಗೆ ತಿಳಿಯುತ್ತೆ. ಬಂಡವಾಳ ಬಯಲಾಗುತ್ತೆ ಎಂದು ಹೇಳಿದರು. ಮಾಜಿ ಸಿಎಂ ಸಿದ್ಧರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಏನ್ ಸತ್ಯಹರಿಶ್ಚಂದ್ರರಾ..? ಮರ್ಯಾದಾ ಪುರುಷೋತ್ತಮರಾ…? ಯಾರು ಶ್ರೀರಾಮಚಂದ್ರರು ಅಂತಾ ಜನರಿಗೆ ತಿಳಿಯುತ್ತದೆ. ಎಲ್ಲರ ವಿರುದ್ದವೂ ತನಿಖೆಯಾಗಲಿ.ಯಾರು ಯಾರು ಸಿಎಂ ಆಗಿದ್ದಾಗ ಏನು ಮಾಡಿದ್ದಾರೆ ತನಿಖೆಯಾಗಲಿ ಎಂದು ಸುಧಾಕರ್ ಆಗ್ರಹಿಸಿದರು. ….. – 224 , . 24, 2021 (..): . . 224 , . “ , .. .. ?, ’?!, , ,” . . ’ .“ 224 , ‘ ,’ ‘,’ .: .. / 224 / : - –- - -