ಕೆಜಿಎಫ್ 2 ಡಬ್ಬಿಂಗ್ ಕೆಲಸ ಶುರು ಮಾಡಿದ ಯಶ್ ಬೆಂಗಳೂರು, ಮಾರ್ಚ್ 24, 2021 (..):ನಟ ಯಶ್ ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಕೆಲಸ ಶುರು ಮಾಡಿದ್ದಾರೆ. ಜುಲೈ 16 ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಇದಾದ ಬಳಿಕ ಬಹುನಿರೀಕ್ಷಿತ ಸಿನಿಮಾ ಕುರಿತ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಹೊಸ ಸುದ್ದಿ ಬಂದಿದೆ. ಕೆಜಿಎಫ್ 2 ಡಬ್ಬಿಂಗ್ ಕಾರ್ಯವನ್ನು ರಾಕಿಂಗ್ ಸ್ಟಾರ್ ಯಶ್ ಶುರುಮಾಡಿದ್ದಾರೆ. ಸಿನಿಮಾ ಕುರಿತ ಮತ್ತಷ್ಟು ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಹಂಚಿಕೊಳ್ಳಲಿದೆ.