ಎಸ್ ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲ್ಲ- ವಿಪಕ್ಷ ನಾಯಕ ಸಿದ್ದರಾಮಯ್ಯ…. ಬೆಂಗಳೂರು,ಮಾರ್ಚ್,23,2021(..):ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸುತ್ತಿದ್ದು ಈ ನಡುವೆ ಕಾಂಗ್ರೆಸ್ ಸದಸ್ಯರು ಸಿಡಿಗಳನ್ನ ಪ್ರದರ್ಶಿಸಿ ವಿಧಾನಸಭೆಯಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಎಸ್ ಐಟಿ ತನಿಖೆಯಿಂದ ಸತ್ಯಾಂಶ ಹೊರ ಬರಲ್ಲ ಸಿಡಿ ಕೇಸ್ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿಲ್ಲ. ವಿಚಾರಣೆ ನಡೆಸಿ ಕೇವಲ ವರದಿ ನೀಡಿ ಎಂದಷ್ಟೇ ಹೇಳಿದ್ದಾರೆ. ಇದರಿಂದ ಯಾವುದೇ ಸತ್ಯಾಂಶ ಹೊರಬರಲ್ಲ ಎಂದು ಆರೋಪಿಸಿದರು. : - –- - -.