ಮೈಸೂರು ಸಂಚಾರಿ ಪೊಲೀಸರ ವರ್ತನೆ ಖಂಡಿಸಿ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ ಸಂಬಂಧ 8 ಮಂದಿ ಬಂಧನ… ಮೈಸೂರು,ಮಾರ್ಚ್,23,2021(..):ನಿನ್ನೆ ಸಂಚಾರಿ ಪೊಲೀಸರ ತಪಾಸಣೆ ವೇಳೆ ದ್ವಿಚಕ್ರವಾಹನ ಸವಾರ ಅಯತಪ್ಪಿ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಂಚಾರಿ ಪೊಲೀಸರ ವರ್ತನೆ ಖಂಡಿಸಿ ಜೆಡಿಎಸ್ ಮುಖಂಡರು ಹಾಗೂ ನಾಗರೀಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬೈಕ್ ಸವಾರ ಸಾವಿನಿಂದ ಅಕ್ರೋಶಗೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನ ಬಂಧಿಸಲಾಗಿದೆ. ಮಂಜು, ಸ್ವಾಮಿನಾಯ್ಕ, ಮಾದೇಗೌಡ ಎಂಬ ಮೂವರು ಪೊಲೀಸರಿಂದ ಪ್ರತ್ಯೇಕ ದೂರು ಪಡೆದು ವಿಜಯನಗರ ಪೊಲೀಸರು ಎಂಟು ಮಂದಿಯನ್ನ ಬಂಧಿಸಿದ್ದಾರೆ. ಈ ಕುರಿತು ಸರ್ಕಾರಿ ವಾಹನ ದ್ವಂಸ, ಕರ್ತವ್ಯ ಅಡ್ಡಿ ಆರೋಪದಡಿ ಕೇಸ್ ದಾಖಲಾಗಿದೆ. ನಿನ್ನೆ ಟ್ರಾಫಿಕ್ ಪೊಲೀಸರ ವರ್ತನೆಯ ವಿರುದ್ದ ಆಕ್ರೋಶ ಭುಗಿಲೆದ್ದಿದ್ದು ಮೈಸೂರು ಹಿನಕಲ್ ಜಂಕ್ಷನ್ ಬಳಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಕೆ.ವಿ‌.ಶ್ರೀಧರ್, ಜೆಡಿಎಸ್ ಮುಖಂಡ ಕೆ‌.ವಿ.ಮಲ್ಲೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. …. : , . 23,2021 (..): - . , . . , . . . .. .. . .: / / / / / / : - - - -8 - -